Responsive Ad Slot

Slider

ವ್ಯಾಪಾರಿ ಗುಟ್ಟು : ಪರಿಚಯ

ವ್ಯಾಪಾರ ಎಂದರೆ ಖರೀದಿಸುವುದು ಹಾಗೂ ಮಾರಾಟಮಾಡುವುದು. ಅರ್ಥಾತ್ ಕ್ರಯ ಹಾಗೂ ವಿಕ್ರಯ. ಇದೊಂದು ರೀತಿಯಲ್ಲಿ ತನ್ನ ಬಳಿ ಅಪಾರ ವಾಗಿರುವುದನ್ನು ವ್ಯಯಿಸುವುದು ಅದಕ್ಕೆ ಪ್ರತಿಫಲ ನಿರೀಕ್ಷಿಸುವದು.

ವ್ಯಾಪಾರ ಮಾಡುವವನನ್ನು ವ್ಯಾಪಾರಿ ಎನ್ನುತ್ತಾರೆ. ಇಂದು ವ್ಯಾಪಾರಿ ಅನುಭವ ಎಲ್ಲರಿಗೂ ಅವಶ್ಯಕ. ಆ ಜಾಣತನ ಇರುವವರೇ ಮಾರುಕಟ್ಟೆಯಲ್ಲಿ ಗೆಲ್ಲುತ್ತಾರೆ. ಒಬ್ಬ ರೈತ ಕೂಡ ವ್ಯಾಪಾರಿ ಚಾಕಚಕ್ಯತೆಯಿಂದ ಉತ್ತಮ ಲಾಭ ಪಡೆಯಬಲ್ಲ.

ಒಬ್ಬ ವ್ಯಾಪಾರಿ ತನ್ನ ಸಂಪೂರ್ಣ ಜೀವನ ನಿರ್ವಹಣೆಗೆ ವ್ಯಾಪಾರದಲ್ಲಿ ಬರುವ ಲಾಭದ ಮೇಲೆ ಅವಲಂಬಿಸಿರುತ್ತಾನೆ. ವ್ಯಾಪಾರದಲ್ಲಿ ಆಗುವ ಖರ್ಚು ಕಳೆದು ಅದರಲ್ಲಿ ಲಾಭಗಳಿಸುವುದು ತುಂಬಾ ಮುಖ್ಯ. ಲಾಭ-ನಷ್ಟ ಇವೆರಡು ವ್ಯಾಪಾರದಲ್ಲಿ ಸಾಮಾನ್ಯ. ಬುದ್ಧಿವಂತಿಕೆ ಇದ್ದರೆ ಇದ್ದರೆ ಒಬ್ಬ ವ್ಯಾಪಾರಿ ತನ್ನ ಬಿಸಿನೆಸ್ಸ್ ಅನ್ನು ಲಾಭದ ಕಡೆಗೆ ಒಯ್ಯ ಬಲ್ಲ. ವ್ಯಾಪಾರ ಅನ್ನುವುದು ಎಲ್ಲರಿಗೂ ಕೈಗೂಡಿ ಬರುವುದಿಲ್ಲ.

ವ್ಯಾಪಾರದ ಒಳಗುಟ್ಟನ್ನು ಅರಿಯುವ ಪ್ರಯತ್ನ ಮಾಡುವುದೇ ಲೇಖನ ಸರಣಿಯ ಗುರಿ.

ಒಬ್ಬ ವ್ಯಾಪಾರಿಯ ಗುರಿ ಎಂದೂ ಮೋಸ ಮಾಡುವುದಲ್ಲ. ಅದಕ್ಕೆ ಬದಲಾಗಿ ಸೇವೆ ನೀಡುವುದು. ಒಬ್ಬ ತರಕಾರಿ ಮಾರುವವ ತರಕಾರಿಗಳನ್ನು ಸಂಗ್ರಹಿಸಿ ಮಾರುತ್ತಾನೆ. ತರಕಾರಿ ಕೆಟ್ಟರೆ ಆ ನಷ್ಟ ತನ್ನ ಮೇಲೆ ತೆಗೆದುಕೊಳ್ಳುತ್ತಾನೆ.

ಒಂದು ಕಾರ್ ಸರ್ವಿಸ್ ಮಾಡುವ ಕಂಪನಿ ಅದಕ್ಕೆ ಬೇಕಾದ ಉಪಕರಣ, ಯಂತ್ರ ಹಾಗೂ ನುರಿತ ಜನ ಒಟ್ಟುಗೂಡಿಸಿ ರಿಪೇರಿ ಸೇವೆಯನ್ನು ನೀಡುತ್ತದೆ. ಅದಕ್ಕೆ ಪರ್ಯಾಯವಾಗಿ ಲೆಕ್ಕ ಮಾಡಿ ಶುಲ್ಕ ವಸೂಲಿ ಮಾಡುತ್ತದೆ. ಈ ಒಂದು ಬಂಡವಾಳ ಹೂಡಿಕೆಗೆ ಹಾಗೂ ತೆಗೆದುಕೊಂಡ ರಿಸ್ಕಗೆ ಅದರ ಮಾಲೀಕ ಲಾಭವನ್ನು ಅಪೇಕ್ಷಿಸುತ್ತಾರೆ. ಅದು ಸಹಜ.

ವ್ಯಾಪಾರಿ ಗುಟ್ಟನ್ನು ಅರಿತಾಗ ಎಲ್ಲವೂ ಅರ್ಥವಾಗುತ್ತದೆ. ಇದು ಕೆಲವರಿಗೆ ವಂಶಪಾರಂಪರ್ಯವಾಗಿ ಬಂದರೆ ಕೆಲವರು ಕಷ್ಟಪಟ್ಟು ಇದನ್ನು ಕಲಿಯುತ್ತಾರೆ. ಕೆಲವರು ವ್ಯಾಪಾರದಲ್ಲಿ ತೊಡಗಿ ನಷ್ಟ ಅನುಭವಿಸುತ್ತಾರೆ. ವ್ಯಾಪಾರಿ ಗುಟ್ಟನ್ನು ಅರಿಯಲು ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಸ್ವಲ್ಪ ಕಾಮನ್ ಸೆನ್ಸ್, ಕಲಿಯಲು ಆಸಕ್ತಿ ಹಾಗೂ ಏನನ್ನಾದರೂ ಸಾಧಿಸಲು ಛಲ ಇದ್ದರೆ ಸಾಕು.

ನಿಮ್ಮದು ಯಾವುದೇ ರೀತಿಯ ಅಂಗಡಿ, ವಹಿವಾಟು, ಸೇವೆ ಇದ್ದರೆ, ವಾಣಿಜ್ಯ ವಿದ್ಯಾರ್ಥಿಗಳು ಆಗಿದ್ದರೆ, ರೈತರು ಆಗಿದ್ದರೆ ಈ ಲೇಖನ ಸರಣಿ ಉಪಯುಕ್ತ ಮಾಹಿತಿ ನೀಡಬಹುದು ಎಂಬುದು ನನ್ನ ಅನಿಸಿಕೆ. ದಯವಿಟ್ಟು ನಿಮ್ಮ ಅನಿಸಿಕೆ ನೀಡಿ.

ಚಿತ್ರ ಕೃಪೆ: ಬಿಂಗ್ ಇಮೇಜ್ ಜನರೇಟರ್

ಈ ಲೇಖನ ಮೊದಲು ವಿಸ್ಮಯ ಪತ್ರಿಕಾ ತಾಣದಲ್ಲಿ 8 ಸಪ್ಟೆಂಬರ್ 2019 ರಂದು ಪ್ರಕಟ ಆಗಿತ್ತು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ