Responsive Ad Slot

ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಈ ವೆಬ್ ಸೈಟ್ ಬಳಸುವ ಓದುಗರ ಮನದಲ್ಲಿ ಮೂಡುವ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇನ್ನೂ ಏನಾದರೂ ಸಂದೇಹ ಇದ್ದರೆ ಮರೆಯದೇ ಕೆಳಗೆ ಕಮೆಂಟ್ ವಿಭಾಗದಲ್ಲಿ ಕೇಳಿ. ತಪ್ಪದೇ ಉತ್ತರ ಕೊಡುತ್ತೇನೆ.

ಈ ತಾಣದಲ್ಲಿ ಯಾವ ವಿಷಯಗಳ ಬಗ್ಗೆ ಬರೆಯುತ್ತೀರಾ?


ವಿಸ್ಮಯ ಎಂದರೆ ಅಚ್ಚರಿ, ವಂಡರ್ ಎಂದರ್ಥ. 

ಪುರಿ ಎಂದರೆ ಬರೀ ತಿನ್ನೋ ಪುರಿ ಅಲ್ಲ ಸಿಟಿ, ಪಟ್ಟಣ ಎಂಬರ್ಥ ಕೂಡಾ ಇದೆ! ಜನಕಪುರಿ ಹೆಸರು ಕೇಳಿರಬಹುದು. ಅದರ ಹಾಗೆ!!

ವಿಸ್ಮಯ ಪುರಿ ಎಂದರೆ ವಂಡರ್ ಸಿಟಿ ಎನ್ನಬಹುದು!

ಮುಖ್ಯವಾಗಿ ಈ ಮುಂದಿನ ವಿಷಯಗಳ ಬಗ್ಗೆ ಲೇಖನ ಇರಲಿದೆ. ಆದರೆ ಉಪಯುಕ್ತ ಮಾಹಿತಿ ಇದ್ದರೆ ಅದು ಯಾವುದೇ ಆಗಿದ್ದರು ಇಲ್ಲಿ ಪ್ರಕಟ ಆದೀತು.
  • ಪ್ರವಾಸ
  • ಹಣಕಾಸು
  • ಸ್ಟಾಕ್ ಮಾರ್ಕೆಟ್
  • ಮನೆ
  • ಖರೀದಿ
  • ಪುಟಾಣಿ
  • ಕಥೆ
  • ಚಿಂತನೆ
  • ತಂತ್ರಜ್ಞಾನ
  • ಕನ್ನಡ

ಈ ತಾಣವನ್ನು ಯಾರು ಬಳಸಬಹುದು?

ಯಾವುದೇ ಬೇಧ ಇಲ್ಲದೇ ಕನ್ನಡ ಬಲ್ಲ ಯಾರೇ ಆದರೂ ಮುಕ್ತ ವಾಗಿ ಈ ತಾಣ ಬಳಸಬಹುದು.

ನೆನಪಿಡಿ ಈ ತಾಣದಲ್ಲಿ ಲೇಖನಗಳು, ಉತ್ತರಗಳು ಬರಿ ಕನ್ನಡದಲ್ಲಿ ಮಾತ್ರ ಇರುತ್ತದೆ. ನೀವೂ ಸಹ ಸಾಧ್ಯವಿದ್ದಷ್ಟು ಕನ್ನಡ ಬಳಸಿ ಎಂಬುದು ನಮ್ಮ ವಿನಮ್ರ ಕೋರಿಕೆ.

ಈ ತಾಣದಲ್ಲಿರುವ ಲೇಖನ ನಕಲು ಮಾಡಬಹುದೇ?


ಈ ತಾಣದಲ್ಲಿರುವ ಪ್ರತಿ ಲೇಖನಗಳ ಹಿಂದೆ ಪರಿಶ್ರಮ ಇದೆ. ಇವುಗಳನ್ನು ಅನುಮತಿ ಇಲ್ಲದೇ ನಕಲು ಅಥವಾ ಮರು ಪ್ರಕಟಿಸುವಂತಿಲ್ಲ. ಆದರೆ ಲೇಖನದ ಲಿಂಕ್ ಅನ್ನು ಮುಕ್ತವಾಗಿ ಹಂಚಬಹುದು.

ಶಿಕ್ಷಣ, ಸಂಶೋಧನೆ, ಕಲಿಕೆಯ ವೈಯಕ್ತಿಕ ಬಳಕೆಗೆ ಇವುಗಳನ್ನು ಬಳಸುವದಕ್ಕೆ, ಉಲ್ಲೇಖಿಸಲು ಯಾವುದೇ ಅಭ್ಯಂತರ ಇಲ್ಲ. ಆದರೆ ಅನುಮತಿ ಇಲ್ಲದೇ ಸಾಮಾಜಿಕ ತಾಣಗಳಲ್ಲಿ, ಬೇರೆ ವೆಬ್ ತಾಣಗಳಲ್ಲಿ, ಪತ್ರಿಕೆಗಳಲ್ಲಿ, ಕೈಪಿಡಿಗಳಲ್ಲಿ ಅಚ್ಚು ಹಾಕಿಸಿ ಅಥವಾ ಇನ್ಯಾವುದೇ ರೂಪದಲ್ಲಿ ಪ್ರಕಟಿಸುವಂತಿಲ್ಲ.

ಈ ತಾಣಕ್ಕೆ ಹಣ ಮಾಡುವ ಉದ್ದೇಶ ಇದೆಯೇ?


ಈ ತಾಣ ಜಾಹೀರಾತು ಹಾಗೂ ಅಫಿಲಿಯೇಟ್ ಲಿಂಕ್ ಮಾರ್ಗದ ಮೂಲಕ ಹಣ ಸಂಗ್ರಹಿಸಲು ಪ್ರಯತ್ನಿಸುತ್ತದೆ. 

ಆದರೆ ಯಾವುದೇ ಕಾರಣಕ್ಕೆ ವಿಷಯವನ್ನು ಬರೆಯುವಾಗ ಇವುಗಳನ್ನು ಗಮನದಲ್ಲಿಟ್ಟು ಬರೆಯುವದಿಲ್ಲ. ಅಂದರೆ ಜನರ ಕೊಳ್ಳುವಿಕೆಯ ಪ್ರಚೋದಿಸುವ, ಮರುಳು ಮಾಡುವ ಮಾರ್ಕೆಟಿಂಗ್ ವಿಧಾನವನ್ನು, ಯಾವುದೇ ಮೋಸದ ಮಾರ್ಗವನ್ನು ವಿಸ್ಮಯ ಪುರಿ ಖಂಡಿತವಾಗ್ಯೂ ಅನುಸರಿಸುವದಿಲ್ಲ. ಅಂದರೆ ಹಣ ಗಳಿಕೆ ಈ ತಾಣದ ಮುಖ್ಯ ಗುರಿ ಅಲ್ಲ. ಜ್ಞಾನದ ಹಂಚಿಕೆ ಮುಖ್ಯ ಗುರಿ.

ಇಂದು ಡೋಮೇನ್ ಹೆಸರಿನಿಂದ ಹಿಡಿದು ವೆಬ್ ಸೈಟ್ ಥೀಮ್, ಸರ್ವರ್ ಹೋಸ್ಟಿಂಗ್ ವರೆಗೆ ಎಲ್ಲಕ್ಕೂ ಹಣ ಸಂದಾಯ ಮಾಡಲೇ ಬೇಕು. 

ಅಷ್ಟೇ ಅಲ್ಲ ಉತ್ತಮ ಕಂಟೆಂಟ್ ನೀಡಲು ಸಹ ಅದರ ಹಿಂದೆ ಪರಿಶ್ರಮ ಬೇಕು. ಕೆಲವೊಮ್ಮೆ ಹಣ ನೀಡಿ ಸೇವೆ ಪಡೆಯಬೇಕು. 

ನಿರ್ವಹಣೆಯೂ ಸೇರಿರುವದರಿಂದ ಉಳಿಸಲು ಬೆಳೆಸಲು ಧನ ಬೆಂಬಲ ಬೇಕೆ ಬೇಕು.

ಒಟ್ಟಿನಲ್ಲಿ ಈ ತಾಣ ಆರ್ಥಿಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆಯುವ ಉದ್ದೇಶ ಹೊಂದಿದೆ. ಆದರೆ ಎಲ್ಲ ಬಳಕೆದಾರರಿಗೆ ಎಲ್ಲ ಜ್ಞಾನ, ಮಾಹಿತಿ ಸಂಪೂರ್ಣ ಉಚಿತ ಆಗಿರುತ್ತದೆ.

ಆದರೆ ಯಾವುದೇ ಕಾರಣಕ್ಕೂ ವಿಸ್ಮಯಪುರಿ.ಕಾಂ ಹಾಗೂ ನಮ್ಮ ತಾಣಗಳು ಯಾರ ಬಳಿಯೂ ಒಂದೇ ಒಂದು ಪೈಸೆಯನ್ನು ಸಹ ದಾನ ಕೊಡುವಂತೆ ಇದುವರೆಗೂ ಕೇಳಿಲ್ಲ. ಮುಂದೆಯೂ ಕೇಳುವದಿಲ್ಲ. ಹಾಗೆ ಯಾರಾದರೂ ಮೋಸ ಮಾಡಲು ಪ್ರಯತ್ನಿಸಿದರೆ ತಕ್ಷಣ ಮೋಸವಾಗದಂತೆ ಎಚ್ಚೆತ್ತು ಕೊಂಡು  ನಿರಾಕರಿಸಿ. ನಮ್ಮ ಗಮನಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳಲಾಗುವದು.

ನಮ್ಮ ಇತರ ತಾಣಗಳನ್ನೂ ಸಹ ಬೆಂಬಲಿಸಿ.

ಗಣಕ ಪುರಿ (ganakapuri.com) - ಕಂಪ್ಯೂಟರ್, ಸ್ಮಾರ್ಟ್ ಫೋನ್ ಇತ್ಯಾದಿ ತಂತ್ರಜ್ಞಾನಗಳ ಬಗ್ಗೆ

ಪದ ಮಂಜರಿ (padamanjari.com) - ಕನ್ನಡ ಪದಗಳ ಅರ್ಥ, ವಿವರಗಳು

--ವಿಸ್ಮಯಪುರಿ.ಕಾಂ

ಸೂಚನೆ: ವಿಸ್ಮಯಪುರಿ, ಗಣಕಪುರಿ, ಪದಮಂಜರಿ ಇದು ವಿಸ್ಮಯನಗರಿ.ಕಾಂ ಅವರ ಟ್ರೇಡ್ ಮಾರ್ಕ್ ಆಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ